ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಆತ : ನಮ್ ನಮ್ಮ ಭಾವನ ಔಷಧದ ಅಂಗಡೀಲಿ ಮಾತ್ರ ಯಾವ ಔಷದ ಬೇಕಾದರೂ ಸಿಗುತ್ತೆ. ಅದಕ್ಕೆ ಆ ಅಂಗಡಿಗೆ ಮುತ್ತಿಕೋತಾರೆ.
ಈತ : ಅದೇನು?
ಆತ : ಇನ್ನೇನು. ಈ ಊರಿನ ಡಾಕ್ಟರುಗಳ ಬ್ರಹ್ಮಲಿಪಿಯನ್ನು ಅರ್ಥ ಮಾಡಿಕೊಳ್ಳೋಕ್ಕಾಗ್ತಿರೋದು ಇರೋದು ಭಾವನಿಗೊಬ್ಬನಿಗೆ.

Join Our Whatsapp Group

ಒಂದು ದಿನಪತ್ರಿಕೆಯಲ್ಲಿ ಜಾಹೀರಾತು ಬಂದಿತ್ತು. ಮನೆ ಬೇಕಾಗಿದೆ ಅದು ಹೆಂಡತಿ ತೌವರು ಮನೆಯನ್ನು ಜ್ವಾಪಿಸಿಕೊಂಡು ಹೋಗದಷ್ಟು ದೊಡ್ಡದಿರಬೇಕು. ಅತ್ತೆ ಬಂದು ಈ ಮನೆಯಲ್ಲಿ ರದಷ್ಟು ಸಣ್ಣದಿರಬೇಕು ಎಂದು!
ಆಡುತ್ತಿದ್ದ ಮಗನನ್ನು ನಿದ್ದೆ ಮಾಡಿಸಲು ತಾಯಿ ಪ್ರಯತ್ನಿಸುತ್ತಿದ್ದಳು. ಮಗ ಹೇಳಿದ. ನೀನು ಮಾಡುವುದು ಸರಿ ಅಲ್ಲ ಅಮ್ಮ ಯಾವಾಗಲೂ ನನಗೆ ನಿದ್ದೆ ಬರದಿದ್ದಾಗ ಮಲಗಿಸಲು ಪ್ರಯತ್ನಿಸುತ್ತಿ.ನಿದ್ದೆ ಮಾಡುತ್ತಿದ್ದಾಗ ಎಬ್ಬಿಸುತ್ತೀ ನೀನೆಂತಹ ಅಮ್ಮ!

ವಾಸು : ಡಾಕ್ಟರೇ, ನೀವು ನನ್ನ ಮಾದ್ಯ ಬಿಡಿಸಬಲ್ಲಿರಾ?
ಡಾಕ್ಟರ್ : ಖಂಡಿತಾ ಬಿಡಿಸುತ್ತೇನೆ.
ವಾಸು : ಪೊಲೀಸರು ನನ್ನ 10 ಮದ್ಯದ ಬಾಟಲ್ ಹಿಡಿದಿಟ್ಟು ಕೊಂಡಿದ್ದಾರೆ ಅದನ್ನು ಬಿಡಿಸಿಕೊಡಿ ಮತ್ತೆ.