ಮನೆ ಯೋಗಾಸನ ಅಷ್ಟಾವಕ್ರಾಸನ

ಅಷ್ಟಾವಕ್ರಾಸನ

0

      ಈ ಆಸನವು ‘ಅಷ್ಟ್ರವಕ್ರ’ ನೆಂಬ ಮುನಿಶ್ರೇಷ್ಠನ ಹೆಸರನ್ನು ಪಡೆದಿದೆ. ಋಷಿಶ್ರೇಷ್ಠನು ಸೀತಾದೇವಿಯ ಸಾಕುತಂದೆಯಾದ  ಮೀಥಿಲಾಧಿಪತಿ ಜನಕ ಮಹಾರಾಜನ ಯೋಗಗುರು. ‘ಅಷ್ಟಾವಕ್ರ’ನೆಂಬುದು ಅನ್ವರ್ಥನಾಮ. ಆ ಮುನಿಯ ರೂಪ ಅತಿವಕ್ರ. ಸೌಂದರ್ಯ ಹೊರತೂರುವ  ದೇಹದ ಎಂಟು ಅಂಗಗಳಲ್ಲಿಯೂ ಈತನ ವಕ್ರತೆ ಯಿದ್ದಿತು.

Join Our Whatsapp Group

ಈ ಮುನಿಗೆ ಕುರೂಪವು ಹೇಗೆ ಬಂದಿತೆನ್ನುವುದನ್ನು ಕಥೆಯೊಂದು ಹೀಗೆ ಹೇಳುತ್ತದೆ :ಈ ಮುನಿಯು ಇನ್ನೂ ತಾಯಿಯ ಗರ್ಭದಲ್ಲಿರುವಾಗಲೇ ಅವನ ತಂದೆ ಕಾಹೋಡ ಅಥವಾ ‘ಕಾಗೋಲ’ ಎಂಬಾತನು ಒಂದು ದಿನ  ವೇದವನ್ನು ಪಠಿಸುತ್ತಿರುವಾಗ ಅನೇಕ ತಪ್ಪುಗಳನ್ನು ಮಾಡಿದನಂತೆ. ಅದನ್ನು ಕೇಳುತ್ತಿದ್ದ ತಾಯಿಯ ಗರ್ಭದಲ್ಲಿದ್ದ ಶಿಶು ಅಪಹಾಸ್ಯಮಾಡಿ ನಕ್ಕಿನಂತೆ ಇದರಿಂದ ಕೋಪಗೊಂಡ ತಂದೆಯು, “ದುಷ್ಟಶಿಶುವೇ!ಈ ನಿನ್ನ ದುರ್ವರ್ತನೆಗಾಗಿ  ನೀನು ನಿನ್ನ ಶರೀರಾವಯವಗಳ ಎಂಟು ಭಾಗಗಳಲ್ಲಿಯೂ ವಕ್ರತ್ವವನ್ನು ಪಡೆದು ಹುಟ್ಟು”ಎಂದು ಶಾಪ ಕೊಡು ಕೊಟ್ಟನಂತೆ ಈ ಕಾರಣದಿಂದ ದೇಹದ ಎಂಟು ಭಾಗಗಳಲ್ಲಿ ಗುರುಪತನ ಮೂಡಿ ಶಿಶು ಜನಿಸಿತಂತೆ ಆ ರೀತಿಯಾಗಿ ಜನಿಸಿದ ಮಗು ಬೆಳೆಯುತ್ತಿರಲು, ಒಂದಾನೊಂದು ದಿನ ಜನಕನ ಅಸ್ಥಾನದಲ್ಲಿ ನಡೆದ ವೇದಾಂತ ವಿಚಾರದ ಚರ್ಚಾಕೂಟದಲ್ಲಿ ಭಾಗವಹಿಸಿದ್ದ ‘ಕಹೋಡ’ನಿಗೆ ಮಿಥಿಲೆಯ ಆಸ್ಥಾನ ಪಂಡಿತ ‘ಬಂದಿ ‘ಎಂಬುವನಿಂದ ಅಪಮಾನ ಕರವಾದ ಸೋಲುಂಟಾಯಿತಂತೆ.  ಆಗ ಚಿಕ್ಕ ನಿಂದಲೂ ಸಮಸ್ತ ವಿದ್ಯೆಯಲ್ಲಿಯೂ ಪರಿಣಿತಿಯನ್ನು ಪಡೆದಿದ್ದ ‘ಅಷ್ಟವಕ್ರ’ನು ತನ್ನ ಪಾಂಡಿತ್ಯದ ಬಲದಿಂದ ಆ ಚರ್ಚಾ ಕೂಟದಲ್ಲಿ ತಾನೂ ಭಾಗವಹಿಸಿ, ತಂದೆಗೆ ಅಪಮಾನ ಮಾಡಿದ್ದಂಥ ಆ ‘ಬಂದಿ’ ಯನ್ನು ವಾದದಲ್ಲಿ ಸಂಪೂರ್ಣವಾಗಿ ಸೋಲಿಸಿದ. ಇದರಿಂದ ಇದರಿಂದ  ಪ್ರೀತನಾದ ತಂದೆಯು ತಾನು ನನ್ನ ಶಿಶುವಿನ ಮೇಲೆ ಹೇರಿದ್ದ  ಶಾಪರೂಪವಾದ ಕುರೂಪಿತನವನ್ನು ಹೋಗಲಾಡಿಚ್ಛಿಸುತ್ತ ಸುಂದರ ‘ರೂಪವನ್ನು’ ಪಡೆ ಎಂದು ವರವನ್ನು ದಯಪಾಲಿಸಿದನಂತೆ. ಅದರ ಫಲವಾಗಿ ಅವನ ದೇಹದಲ್ಲಿ ಸೌಂದರ್ಯವು ಮೂಡಿತು ಇಂಥ ಮುನಿಯ ಪಾಂಡಿತ್ಯವನ್ನು ಮೆಚ್ಚಿ ಜನಕ ಮಹಾರಾಜನು ಆತನನ್ನು ಗುರುವನ್ನಾಗಿ ಸ್ವೀಕರಿಸಿ ಆತನಿಂದ ಯೋಗಾಸನ, ಪ್ರಾಣಾಯಾಮ, ಇವೇ ಮೊದಲಾದವುಗಳಲ್ಲಿ ಉಪದೇಶಪಡೆದು, ಕರ್ಮಯೋಗಿಯೆನಿಸಿ, ಜೀವನ್ಮುಕ್ತನ  ಸ್ಥಿತಿಯನ್ನು ಪಡೆದನಂತೆ.

 ಅಭ್ಯಾಸ ಕ್ರಮ  

1. ಮೊದಲು, ಎರಡು ಪಾದಗಳ ನಡುವೆ 18 ಅಂಗುಲಗಳ ಸ್ಥಳವನ್ನು ಬಿಟ್ಟು ನಿಂತುಕೊಳ್ಳಬೇಕು.

2. ಬಳಿಕ,ಮಂಡಿಗಳನ್ನು ಬಗ್ಗಿಸಿ, ಎರಡು ಪಾದಗಳ ಮಧ್ಯೆ ಬಲದಂಗೈಯನ್ನು ನೆಲದ ಮೇಲೂರಿ ಎಡದಂಗೈಯನ್ನು ಎಡಪಾದದಾಚೆ ಅದರ ಪಕ್ಕಕ್ಕೆ ಊರಿಡಬೇಕು.

3. ಆಮೇಲೆ, ಬಲಗಾಲನ್ನು ಬಲ ತೋಳಿನ ಮೇಲೆ ಹಾಯಸಿ, ಬಲತೊಡೆಯನ್ನು ಬಲಮೊಣಕೈಯ ಮೇಲ್ಬಾಗದ ಮೇಲ್ದೋಳಿನ ಮೇಲೊರಗಿಸಿ ಬಳಿಕ ಎಡಗಾಲನ್ನು ತೋಳುಗಳ ನಡು ತಾಣದಲ್ಲಿ ಮುಂದಕ್ಕೆ ತಂದು ಅದನ್ನು ಬಲ ತೋಳಿನ ಬಳಿ ಸರಿಸಬೇಕು.

4. ಅನಂತರ ಉಸಿರನ್ನು ಹೊರ ಬಿಟ್ಟು ಎರಡು ಕಾಲುಗಳನ್ನು ನೆಲದಿಂದ ಮೇಲೆತ್ತಿ,ಬಳಿಕ ಎಡಪಾದಗಳನ್ನು ಬಲಗಲ ಗಿಣ್ಣಿನ ಮೇಲಿಡಬೇಕು ಆಮೇಲೆ ಕಾಲುಗಳನ್ನು ಬಲಗಡೆಯಲ್ಲಿ  ಪಕ್ಕಕ್ಕೆ ಚಾಚೀಡಬೇಕು ತರುವಾಯು,  ಬಲತೋಳನ್ನು ಎರಡು ತೊಡೆಗಳ ಮಧ್ಯೆ ಬಿಗಿಯಾಗುವಂತೆ ಸಿಕ್ಕೀಸಿ, ಅದನ್ನು ಮೋಣಕೈ ಬಳಿ ಸ್ವಲ್ಪ ಬಾಗಿಸಬೇಕು. ಆದರೆ ಎಡ ತೋಳನ್ನು ಬಗ್ಗಿಸದೆ ನೀಳವಾಗಿಯೇ ಇಟ್ಟಿರಬೇಕು. ಆ ಭಂಗಿಯಲ್ಲಿ,ಸಾಮಾನ್ಯ ಉಸಿರಾಟ ದಿಂದಿದ್ದು ಕೈಗಳ ಮೇಲೆ ಸಮತೋಲನ ಮಾಡಿ ನಿಲ್ಲಿಸಬೇಕು. ಇದು ಮೊದಲನೆಯ ಹಂತ.

5. ಇದಾದ ಮೇಲೆ ಉಸಿರನ್ನು ಹೊರಹೋಗಿಸಿ, ಮೊಣ ಕೈಗಳನ್ನು ಬಾಗಿಸಿ,ಬಳಿಕ ರುಂಡಮುಂಡ ಭಾಗಗಳನ್ನು ಬಗ್ಗಿಸಿ, ಅವುಗಳನ್ನು ನೆಲಮಟ್ಟಕ್ಕೆ ಸಮಾನಂತರವಾಗಿ ನಿಲ್ಲಿಸಿ ಸಮವಾಗಿ ಉಸಿರಾಟ ನಡೆಸುತ್ತ, ಅವೆರಡನ್ನು ಅತಿತ್ತ ಸರಿಸುತ್ತಿರಬೇಕು ಇದು ಎರಡನೆಯ ಹಂತ

6. ಆ ಬಳಿಕ ಉಸಿರನ್ನು ಒಳಕ್ಕೆಳೆದು, ತೋಳುಗಳನ್ನು ನೇರವಾಗಿಸಿ, ಮುಂಡವನ್ನು ಮೇಲೆತ್ತಿ ಕಾಲುಗಳ ಹೆಣಿಗೆಗ ಳನ್ನು ಬಿಚ್ಚಿ ಅವನ್ನು ನೆಲಕ್ಕಿಳಿಸಬೇಕು.

7. ಇನ್ನೊಂದು ಪಕ್ಕದಲ್ಲಿಯೂ ಇದೇ ಭಂಗಿಯನ್ನು ಅಭ್ಯಸಿಸಿ, ಅದರಲ್ಲಿ ಅಷ್ಟೇ ಹೊತ್ತು ನೆಲೆಸಬೇಕು. ಇದರಲ್ಲಿ ‘ಎಡ’ ‘ಬಲ’ ಎಂಬ ಪದಗಳೆರಡು ‘ಬಲ’ ‘ಎಡ’ ಎಂಬ ಪದಗಳನ್ನಳವಡಿಸಿ ಮೇಲಿನ ಅಭ್ಯಾಸ ಕ್ರಮದಲ್ಲಿ ಎರಡರಿಂದ 5 ರವರೆಗಿರುವ ವಿವರಣೆಯನ್ನು ತಪ್ಪದೆ  ಅನುಸರಿಸಬೇಕು.

 ಪರಿಣಾಮಗಳು

     ಈ ಆಸನವು ಕೈಮಣಿಕಟ್ಟುಗಳಿಗೂ ತೋಳುಗಳಿಗೂ ಶಕ್ತಿಕೊಡುವುದು ಮಾತ್ರವಲ್ಲದೆ ಕಿಬ್ಬೋಟ್ಟುಯೊಳಗಿನ ಮಾಂಸಖಂಡಗಳನ್ನು ಚೆನ್ನಾಗಿ ಬೆಳೆಸಲು ನೇರವಾಗಿರುತ್ತದೆ.