ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ವಾಸು : ಲೇ ಜ್ಯೋತಿ, ನಿನಗೇಕೆ ನನಗೆ ಪ್ರೇಮ ಪತ್ರ ಬರೆಯೊಲ್ಲ?

 ಜ್ಯೋತಿ : ಏನಂತಾ ಬರೀಲಿ?

 ವಾಸು : “ನಿಮ್ಮ ಕಾಲು ಭೂಮಿ ಮೇಲೆ ನಿಲ್ಲಬಾರದು ನೀವು ಆಕಾಶದಲ್ಲಿ ಹಾರಾಡ್ತಾ ಇರಬೇಕು” ಹಾಗೆ ಬರಿ.

 ಜ್ಯೋತಿ : ಪತ್ರ ಬರಿಯೋದೇನು  ಬೇಡ ನೀವು ಹಾಗೆ ಇರಲಿ ಅಂತ ನನ್ನಾಸೆ.

 ವಾಸು : ಅದು ಹೇಗೆ?

 ಜ್ಯೋತಿ : ನೀನು ಹಾಕೊಂಡ್ರಾಯ್ತು.

Join Our Whatsapp Group

***

 ವೆಂಕಿ : ಲೋ ವಾಸು ಅದೇನೋ ಪ್ರೇಮಿಗಳ ಪದ್ಯ ಬರೆದಿದ್ದೀನಿ ಅಂದ್ಯಲ್ಲ ಹೇಳು ಸ್ವಲ್ಪ.

 ವಾಸು : ಅದಾ ಹೇಳ್ತೀನಿ ಕ್ಳು.

 “ಫೋನ್ ಮಾಡಬೇಡಿ ಡಿಯರ್, ಫಾದರ್ ಇರ್ತಾರೆ ನಿಯರ್ ”

 “ಮಾತನಾಡಲಾಗೋಲ್ಲ ಕಿಲ್ಲರ್, ವಿಷಯ ಗೊತ್ತಾದ್ರೆ ಪಿಯರ್ ”

 “ಮೆಸೇಜ್ ಮಾಡು ಡಿಯರ್,ನಿನ್ನ ಜೊತೆ ಇರ್ತೀನಿ ಫಾರ್ ಎವರ್”

***

 ಅಪ್ಪ :  ಅಲ್ಲವೋ, ವಾಸು, ಯಾಕೋ ಯಾವಾಗ್ಲೂ ಕಾಲಿಗೆ ನೀರು ಹಾಕೋಳ್ತಾನೆ ಇರ್ತೀಯ?

 ವಾಸು : ನೀವೇ ಹೇಳಿದ್ರಲ್ಲಪ್ಪಾ

 ಅಪ್ಪ : ನಾನೆಲ್ಲೋ ಹೇಳಿದೆ?

 ವಾಸು : ಅದೇ ಗಿಡದ ಬುಡಕ್ಕೆ ನೀರು ಹಾಕ್ತಾ ಇದ್ರೆ ಗಿಡ ಬೇಗ ಬೆಳೆಯುತ್ತೇ ಅಂತ.

 ಅಪ್ಪ : ಅದಕ್ಕೆ

 ವಾಸು : ನಾನೂ ಬೇಗ ಎತ್ತರವಾಗಬೇಕು ಅಂತ ಯಾವಾಗಲೂ ಕಾಲಿಗೆ ನೀರು ಹಾಕ್ಕೊಳ್ತೀನಿ.