“ಎರಡನೇ ಮದುವೆ ಆದರೆ ಆದರೇನಂತೆ, ನನ್ನ ಗಂಡ ಭೂಲೋಕಕ್ಕಿಂತ ಸ್ವರ್ಗ ವಾಸಿ ಅನ್ನೋದು ತೋರಿಸಿಕೊಡ್ತಾ ಇದ್ದಾರೆ”
ಮೊದಲನೇ ಹೆಂಡ್ತಿ ಎಲ್ಲಿದ್ದಾಳೆ ಈಗ?
“ಸ್ವರ್ಗ ವಾಸಿ!”
ಗಂಡ : ಗಾಯಿತ್ರಿ ತಗೊಂಡಿರೋ ಅಂಥಾ ಸೀರೇನೇ ಬೇಕು ಅಂತಾ ಯಾಕೆ ಹಟ ಹಿಡಿತಿದೀಯ?
ಹೆಂಡ್ತಿ : ಅವಳ ಗಂಡನಂಥ ಗಂಡನ್ನ ಪಡೆಯೋಕಂತೂ ಪುಣ್ಯ ಮಾಡಿಲ್ಲ ಸೀರೇನಾದ್ರೂ ತಗೋಳೋಣ ಅಂತ.
ರಾಣಿ : ನಿಮ್ಮೆಜಮಾನ್ರನ್ನ ನೀವು ಹೆದರಿಸ್ತೀರೊ ಇಲ್ಲ ಅವರು ನಿಮ್ಮನ್ನು ಹೆದರಿಸ್ತಾರೋ?
ಗಿರಿಜಾ : ಅವರು ಮಾಡಿರೋ ಸಾಲ ನಮ್ಮಿಬ್ರನ್ನೂರು ಹೆದರಿಸ್ತಿದೆ.