ಮನೆ ಅಪರಾಧ ಬೈಕ್‌ ಗೆ ಕಂಟೈನರ್‌ ಲಾರಿ ಡಿಕ್ಕಿ: ಮಹಿಳೆ ಸಾವು

ಬೈಕ್‌ ಗೆ ಕಂಟೈನರ್‌ ಲಾರಿ ಡಿಕ್ಕಿ: ಮಹಿಳೆ ಸಾವು

0

ನೆಲಮಂಗಲ (Nelamangala)-ಬೈಕ್‌ಗೆ ಕಂಟೈನರ್‌ ಲಾರಿ ಹೊಡೆದ ಪರಿಣಾಮ ಬೈಕ್‌ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಭಾಗ್ಯಮ್ಮ (45) ಮೃತ ಮಹಿಳೆ. ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೆರೆಕೋಡಿಯ ಬಳಿ ಅಪಘಾತ ಸಂಭವಿಸಿದೆ.

ಸೋಂಪುರ ಹೋಬಳಿಯ ಕರೀಮಣ್ಣೆ ವಾಸಿಯಾದ ಭಾಗ್ಯಮ್ಮ ಮಗನಾದ ಹರೀಶ್‌ ಅವರ ವಿವಾಹದ ಲಗ್ನ ಪತ್ರಿಕೆ ನೀಡಲು ತ್ಯಾಮಗೊಂಡ್ಲು ಹೋಬಳಿಯ ವಿವಿಧ ಗ್ರಾಮಗಳಿಗೆ ತೆರಳುವ ಮಾರ್ಗ ಮಧ್ಯೆದಲ್ಲಿ ಕಾರೇಹಳ್ಳಿಗೆ ಲಗ್ನ ಪತ್ರಿಕೆ ನೀಡಲು ತೆರಳುವಾಗ, ವೇಗವಾಗಿ ಬಂದ ಕಂಟೈನರ್‌ ಲಾರಿ ಬೈಕ್‌ ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಹಿಂಬದಿ ಕುಳಿತಿದ್ದ ಭಾಗ್ಯಮ್ಮ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿರುವ ಗಿರೀಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ತ್ಯಾಮಗೊಂಡ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಸ್ಥಳಕ್ಕೆ ಪಿಎಸೈ ಚಿಕ್ಕನರಸಿಂಹಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಸೀಲನೆ ನಡೆಸಿದರು.

ಹಿಂದಿನ ಲೇಖನಪಿಎಸ್‌ ಐ ಹಗರಣ: ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ; ಮೂವರ ಬಂಧನ
ಮುಂದಿನ ಲೇಖನಜೋಧಪುರದಲ್ಲಿ ಕೋಮುಗಲಭೆ: 97 ಮಂದಿ ಬಂಧನ