ಮನೆ ದೇವರ ನಾಮ ಬಿಡುವೇನೇನಯ್ಯ ಹನುಮ ನಿನ್ನಾ

ಬಿಡುವೇನೇನಯ್ಯ ಹನುಮ ನಿನ್ನಾ

0

ಬಿಡುವೇನೇನಯ್ಯ ಹನುಮ ನಿನ್ನಾ ಬಿಡುವೇನೇನಯ್ಯ ಹನುಮ |

ಬಿಡುವೆನೇನೊ ಹನುಮ ನಿನ್ನ ಅಡಿಗಳಿಗೆ ಎರಗುವೆ ನಾನು |

ದೃಢ ಭಕುತಿ ಸುಜ್ಞಾನವನ್ನು ತಡಮಾಡದೆ ಕೊಡುವ ತನಕ

||ಬಿಡುವೇನೇನಯ್ಯ||

ಹಸ್ತ ಮ್ಯಾಲಕೆತ್ತಿದರೇನು ಹಾರಗಾಲ ಹಾಕಿದರೇನು |

ಭ್ರತ್ಯನು ನಿನ್ನವನು ನಾನು | ಹಸ್ತಿವರದನ ತೋರೊ ತನಕ |

||ಬಿಡುವೇನೇನಯ್ಯ||

ಡೊಂಕು ಮೋರೆ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲ |

ಕಿಂಕರನು ನಿನ್ನವ ನಾನು | ವೆಂಕಟ ವಿಠ್ಠಲನ ತೋರೋ ತನಕ

||ಬಿಡುವೇನೇನಯ್ಯ||

ಹಿಂದಿನ ಲೇಖನನಾಗರಹೊಳೆ: ರಾಷ್ಟ್ರೀಯ ಆನೆ ಗಣತಿಗೆ ಚಾಲನೆ
ಮುಂದಿನ ಲೇಖನಹಲಾಸನ