ಮನೆ ಅಪರಾಧ ಪ್ರಿಯಕರನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

ಪ್ರಿಯಕರನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

0

ಚೆನ್ನೈ: ಪ್ರಿಯಕರನ ಮುಂದೆಯೇ ಯುವತಿಯೊಬ್ಬಳ ಮೇಲೆ ಸಾಮೂಹಿಕವಾಗಿ ಬಲಾತ್ಕಾರವೆಸಗಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಕಾಲೇಜು ಯುವತಿ ತನ್ನ ಪ್ರಿಯಕರನ ಜೊತೆ ತಿರುಗಾಟಕ್ಕೆಂದು ಹೊರಗಡೆ ಹೋಗಿದ್ದಾರೆ. ಅಲ್ಲಿಂದ ವಾಪಾಸ್‌ ಆಗುವ ವೇಳೆ ಮಾಸ್ಕ್‌ ಹಾಕಿಕೊಂಡಿದ್ದ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಇಬ್ಬರನ್ನು ತಡೆದು ಬೆದರಿಸಿದ್ದಾನೆ. ಆ ಬಳಿಕ ಕೆಲ ಸಮಯದ ನಂತರ ನಾಲ್ವರು ಜೊತೆಗೂಡಿ ಜೋಡಿಯನ್ನು ಬೆದರಿಸಿದೆ. ಚೂರಿಯನ್ನು ತೋರಿಸಿ ಯುವತಿಗೆ ಕಿರುಕುಳ ನೀಡಿ, ಒಬ್ಬರ ಮೇಲೆ ಒಬ್ಬರಂತೆ ಬಲಾತ್ಕಾರವೆಸಗಿದ್ದಾರೆ.

ಪ್ರಿಯಕರನ ಮುಂದೆಯೇ ಯುವತಿಯ ಮೇಲೆ ಬಲಾತ್ಕಾರವೆಸಗಿದ ಆರೋಪಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಜೋಡಿ ದೂರು ದಾಖಲಿಸಿದ್ದು, ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿದ್ದಾರೆ. ಆರನೇ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಹಿಂದಿನ ಲೇಖನಅಲ್ಪಸಂಖ್ಯಾತ ಸ್ಥಾನಮಾನ ನಿರ್ಧರಣ ಅಧಿಕಾರ ಕೇಂದ್ರದಲ್ಲಿಯೇ ಮುಂದುವರೆಯಲಿ: ಸುಪ್ರೀಂ ಮುಂದೆ ಕರ್ನಾಟಕದ ನಿಲುವು
ಮುಂದಿನ ಲೇಖನಕ್ಷುಲ್ಲಕ ಕಾರಣಕ್ಕೆ ಜಗಳ: ತಾಯಿ, ಮಗ ಆತ್ಮಹತ್ಯೆ