ಮನೆ ಮನರಂಜನೆ ಉದ್ಯಮಿಯನ್ನು ಮದ್ವೆಯಾಗಿ, ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್

ಉದ್ಯಮಿಯನ್ನು ಮದ್ವೆಯಾಗಿ, ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್

0

ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ, ಇನ್ನೇನಾದ್ರು..? ಹೇಳ್ಬೇಕಾ ಅಂತ ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೃಷ್ಣನ್ ಕೌಂಟರ್ ಕೊಟ್ಟಿದ್ದಾರೆ. ಚಿತ್ರರಂಗದಿಂದ ತ್ರಿಶಾ ದೂರ ಸರಿಯುತ್ತಿದ್ದಾರೆ ಅಂತ ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವದಂತಿ ಹರಿದಾಡ್ತಿದೆ.

ಇದಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಸ್ಯಾಸ್ಪದವಾಗಿ ಪೋಸ್ಟ್ ಮಾಡಿರುವ ತ್ರಿಶಾ, ನಾನು ಸಿನಿಮಾಗಳನ್ನು ತೊರೆದಿದ್ದೇನೆ, ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನೆ. ನಿನ್ನೆಗೆ 2 ವರ್ಷ ತುಂಬಿದ 4 ಮಕ್ಕಳನ್ನು ಬೆಳೆಸುತ್ತಿದ್ದೇನೆ. ನಾನು ಇನ್ನೇನಾದರೂ ಸೇರಿಸಬೇಕೇ ಎಂದು ನಟಿ ಬರೆದುಕೊಂಡಿದ್ದಾರೆ.

ತ್ರಿಶಾ ಈ ಪ್ರತಿಕ್ರಿಯೆ ತಕ್ಷಣವೇ ವೈರಲ್ ಆಗಿದೆ. ತ್ರಿಶಾ ಕೃಷ್ಣನ್, ಕೊನೆಯದಾಗಿ ಮಣಿರತ್ನಂ ಅವರ ಥಗ್ ಲೈಫ್‌ನಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಸೂರ್ಯ ಜೊತೆಗೆ ಕರುಪ್ಪು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.