ಗುರುಗಳು: ಈ ಕ್ಲಾಸಿನಲ್ಲಿ ಮೂರ್ಖರು ಯಾರಿದ್ದೀರಿ? ಎದ್ದು ನಿಲ್ಲಿರಿ.
(ಒಬ್ಬ ಹುಡುಗ ಮಾತ್ರ ಎದ್ದು ನಿಂತ)
ಗುರುಗಳು: ಶಹಬಾಶ್! ಒಬ್ಬನಾದರೂ ಪ್ರಾಮಾಣಿಕತನದಿಂದ ಎದ್ದು ನಿಂತಿರುವಿಯಲ್ಲ!
ಗುಂಡ: ಹಾಗಲ್ಲ ಸರ್! ಕ್ಲಾಸಿನಲ್ಲಿ ನೀವು ಒಬ್ಬರೇ ಎದ್ದು ನಿಂತಿದ್ದೀರಿ. ನೀವು ಒಬ್ಬರೇ ಆಗುತ್ತೀರಿ ಎಂದು ನಾನೂ ಎದ್ದುನಿಂತೆ!
ಆತ: ಪಾಪ! ಕಮಲನಾಥನಿಗೆ ದುರದೃಷ್ಟ ಆರಂಭವಾಯಿತು.
ಈತ: ಹೇಗೆ?
ಆತ: ಅವನು ನನ್ನ ಹೆಂಡತಿ ಜೊತೆ ಓಡಿಹೋಗಿದ್ದಾನೆ!
ಟೀಚರ್: ಸೂರ್ಯ ಎಲ್ಲಾ ದೇಶಗಳಲ್ಲೂ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲೇ ಮುಳುಗುತ್ತಾನೆ ಏಕೆ?
ಪವನ: ಅವನಿಗೆ ಬೇರೆ ದಿಕ್ಕಿನ ಬಗ್ಗೆ ಗೊತ್ತಿಲ್ಲ. ಅದಕ್ಕೆ ಟೀಚರ್.