ಮನೆ ಮನರಂಜನೆ ‘ಅಬಜಬದಬ’ ಚಲನಚಿತ್ರದಲ್ಲಿ ‘ಶಂಕರ್ ನಾಗ್’

‘ಅಬಜಬದಬ’ ಚಲನಚಿತ್ರದಲ್ಲಿ ‘ಶಂಕರ್ ನಾಗ್’

0

ಎಸ್. ರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಮಯೂರ ರಾಘವೇಂದ್ರ ನಿರ್ದೇಶನದ ‘ಅಬಜಬದಬ’ ಚಲನಚಿತ್ರ ಶೇ 80 ಚಿತ್ರೀಕರಣ ಮುಗಿಸಿದ್ದು,  ಚಿತ್ರತಂಡ ಚಿತ್ರ ಪೋಸ್ಟರ್‌ ಬಿಡುಗಡೆ ಮಾಡಿದೆ.

ಚಿತ್ರದಲ್ಲಿ ಎರಡು ಹಾಡು ಹಾಗೂ ಒಂದು ಸಾಹಸ ದೃಶ್ಯಗಳ ಚಿತ್ರೀಕರಣ ಬಾಕಿಯಿದೆ. ಶಂಕರ್‌ನಾಗ್‌ ಈಸ್‌ ಬ್ಯಾಕ್‌ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.

‘ಅಬಜಬದಬ’ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ. ಅದರಲ್ಲಿ ಮುಖ್ಯ ವಿಶೇಷತೆ ಎಂದರೆ ನಮ್ಮ ಕರಾಟೆ ಕಿಂಗ್ ‘ಶಂಕರ್ ನಾಗ್’ ಅವರನ್ನು ಮತ್ತೆ ತೆರೆ ಮೇಲೆ ಕರೆತರುತ್ತಿರುವುದು. ಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸ ಪ್ರಾರಂಭವಾಗಿದೆ.

ಮುಂದಿನ ವರ್ಷ ನಮ್ಮ ಶಂಕರ್‌ನಾಗ್‌ ಅವರನ್ನು ತೆರೆ ಮೇಲೆ ನೋಡಿ ಆನಂದಿಸಬಹುದು ಎಂದಿದೆ ಚಿತ್ರತಂಡ.

ಹಿಂದಿನ ಲೇಖನಸಿದ್ದರಾಮಯ್ಯ ಮೊದಲು ಇಂತಹ ಕಡೆ ಸ್ಪರ್ಧೆ ಮಾಡುತ್ತೇನೆಂದು ಹೇಳಲಿ: ಸಂಸದ ವಿ.ಶ್ರೀನಿವಾಸ ಪ್ರಸಾದ್ ಸವಾಲು
ಮುಂದಿನ ಲೇಖನಹಿಂದು ಪದ ಕುರಿತ ಹೇಳಿಕೆ ಹಿಂಪಡೆದ ಸತೀಶ್ ಜಾರಕಿಹೊಳಿ: ಸಿಎಂಗೆ ಪತ್ರ