ಡಾಕ್ಟರ್: ನಿಮಗೆ ಮಂಡೆ ಆಪರೇಷನ್ ಮಾಡ್ತೀನಿ.
ಉಡುಪಿ ಮಾಣಿ: ಇದೆಂಥಾ ಪಿರಿ ಪಿರಿ ಡಾಕ್ಟ್ರು ಮಾರಾಯ್ರೆ, ನಾನು ಎದೆನೋವೂ ಅಂತ ಇಲ್ಲಿ ಬಂದ್ರೆ ನನ್ನ ಮಂಡೆ ಆಪರೇಷನ್ ಮಾಡ್ತೀನಿ ಅಂತಾರಲ್ಲ ಮಾರಾಯ್ರೆ.
ಶಿಕ್ಷಕ: ಎಲ್ಲರೂ ಓಡೋಕೆ ಸಿದ್ಧರಾಗಿದ್ದೀರಾ?
ನಾಣಿ: ಸಾರ್, ಎಲ್ಲರೂ ಯಾಕೆ ಓಡ್ತಾ ಇದ್ದಾರೆ?
ಶಿಕ್ಷಕ: ಇದು ಓಟದ ಸ್ಪರ್ಧೆ, ಗೆದ್ದವನೊಬ್ಬನಿಗೆ ಬಹುಮಾನ ಸಿಗುತ್ತೆ.
ನಾಣಿ: ಒಬ್ಬನಿಗೆ ಬಹುಮಾನ ಸಿಗೋದಾದ್ರೆ ಎಲ್ಲಾ ಯಾಕೆ ಓಡೇಕು?
ಸುಬ್ಬಿ: ರೀ ಸುಮ್ಮೆ ಬರೀ ಅದೇನು ಅಲ್ಲಿ ನೋಡ್ತಾ ಇದ್ದೀರಿ?
ನಾಣಿ: ಆ ಹುಡುಗಿ ಎಷ್ಟು ಚಂದವಾಗಿ ಡ್ರಸ್ ಮಾಡ್ಕೊಂಡಿದ್ದು ಅದ ನೋಡ್ತಾ ಇದ್ದೆ.
ಸುಬ್ಬಿ: ಅಲ್ರೀ ಮದುವೆಯಾಗಿ ಮೂರು ಮಕ್ಕಳಿದ್ರೂ ಹುಡುಗೀರ್ನ ನೋಡೋದ ಬಿಡ್ಲಿಲ್ವಲ್ಲ
ನಾಣಿ: ಅಂದ್ರೆ ನೀನು ಹೇಳೋದು ಉಪವಾಸ ಮಾಡೋನು ಮೆನು ಕಾರ್ಡು ನೋಡ್ಲೆಬಾರ್ದೇನು?