ಮನೆ ಉದ್ಯೋಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ:  ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ:  ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ

0

ಸಹಾಯಕರು (ಜುಡಿಷಿಯಲ್) 6 ಹುದ್ದೆಗಳು, ಸ್ಟೆನೋಗ್ರಾಫರ್ ಗ್ರೇಡ್ 1- 4 ಹುದ್ದೆಗಳು, ಹಿಂದಿ ಭಾಷಾಂತರಕಾರರು 1 ಹುದ್ದೆ, ಗ್ರಂಥಾಪಾಲಕರು 2 ಹುದ್ದೆಗಳು, ಸ್ಟೇನೋಗ್ರಾಫರ್ ಗ್ರೇಡ್ 2- 9 ಹುದ್ದೆಗಳು, ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್) 5 ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ.

ಒಟ್ಟು 27 ಹುದ್ದೆಗಲು ಖಾಲಿ ಇದ್ದು, ಉದ್ಯೋಗ ಸ್ಥಳ ನವದೆಹಲಿ ಪ್ರಧಾನ ಪೀಠ, ಭೂಪಾಲ್, ಚೆನ್ನೈ, ಪುಣೆ, ಕೋಲ್ಕತ್ತಾದ ವಲಯ ಕೇಂದ್ರಗಳಾಗಿವೆ.

ವಿದ್ಯಾರ್ಹತೆ: ಅಸಿಸ್ಟಂಟ್ (ಜುಡಿಷಿಯಲ್): ಕಾನೂನು ಪದವಿ ಜತೆಗೆ ಕಂಪ್ಯೂಟರ್ ಜ್ಞಾನ, ಸ್ಟೆನೋಗ್ರಾಫರ್ ಗ್ರೇಡ್ 1: ಪದವಿ ಪಾಸ್, ಹಿಂದಿ ಭಾಷಾಂತರಕಾರರು: ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ, ಲೈಬ್ರರಿಯನ್ : ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಾಸ್, ಸ್ಟೆನೋಗ್ರಾಫರ್ ಗ್ರೇಡ್ 2: ದ್ವಿತೀಯ ಪಿಯುಸಿ ಪಾಸ್, ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್) : ಎಸ್ಎಸ್ಎಲ್ಸಿ ಪಾಸ್ ಮತ್ತು ಚಾಲನಾ ಪರವಾನಗಿ ಪಡೆದಿರಬೇಕು.

ಅರ್ಜಿಯನ್ನು ಆಫ್ಲೈನ್ ಮಾದರಿಯಲ್ಲಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ದಾಖಲೆಗಳನ್ನು ಲಗತ್ತಿಸಿ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು. ಅರ್ಜಿಯನ್ನು ರಿಜಿಸ್ಟ್ರಾರ್ ಜನರಲ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಪ್ರಧಾನ ಪೀಠ, ಫರೀದ್ಕೋಟ್ ಹೌಸ್, ಕೋಪರ್ನಿಕಸ್ ಮಾರ್ಗ, ನವದೆಹಲಿ- 110001 ಇಲ್ಲಿಗೆ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಜು.25 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ, www.greentribunal.gov.in ಗೆ ಭೇಟಿ ನೀಡಿ