ಮನೆ ಅಪರಾಧ ರಾಯಚೂರು: ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರನ ಮಗ ಸಾವು

ರಾಯಚೂರು: ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರನ ಮಗ ಸಾವು

0

ರಾಯಚೂರು: ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರರನ ಮಗ‌ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಕೆರೆಯಲ್ಲಿ ನಡೆದಿದೆ.

Join Our Whatsapp Group

ಸಲೀಂ ಹುಸೇನ್​​ಸಾಬ್(32), ಯಾಸೀನ್ ರಫೀ(13) ಮೃತ ದುರ್ದೈವಿಗಳು.

ನಿನ್ನೆ ಸಂಜೆ ಮೃತ ಬಾಲಕ ನರೇಗಾ ಕೆಲಸಕ್ಕೆ ಚಿಕ್ಕಪ್ಪನ ಜೊತೆಯಲ್ಲಿ ಹೋಗಿದ್ದ. ಈ ವೇಳೆ ಕುಡಿಯಲು ಕೆರೆಯಿಂದ ನೀರು ತುಂಬಿಕೊಂಡು ಬರಲು ಬಂದ ಬಾಲಕ ಯಾಸೀನ್ ರಫೀ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆ ಹೋಗಿದ್ದ ಚಿಕ್ಕಪ್ಪ ಸಲೀಂ ಈಜು ಬಾರದ ಹಿನ್ನೆಲೆ ಇಬ್ಬರೂ ಮೃತಪಟ್ಟಿದ್ದಾರೆ.

ಯಾಪಲದಿನ್ನಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.