ಮನೆ ಯೋಗಾಸನ ಪ್ರಾಣಾಯಾಮಗಳ ವಿಧಾನಗಳು

ಪ್ರಾಣಾಯಾಮಗಳ ವಿಧಾನಗಳು

0

Join Our Whatsapp Group

ಪ್ರಾಣಾಯಾಮಗಳಲ್ಲಿ ಬಹಳಷ್ಟು ವಿಧಾನಗಳಿದ್ದು ಅವುಗಳಲ್ಲಿ ಈ ಕೆಳಗಿನವುಗಳನ್ನು ಅಭ್ಯಾಸ ನಿಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ನಿಮ್ಮ ಪ್ರಕೃತಿಗೆ ಯೋಗ್ಯವನಿಸಿದ ಪ್ರಾಣಾಯಾಮಗಳನ್ನು ಅಳವಡಿಸಿಕೊಳ್ಳಬಹುದು….

ಬೀಜ ಪ್ರಾಣಾಯಾಮ :-

ಇದರಲ್ಲಿ ಎರಡು ವಿಧ. ಸಬೀಜ ಪ್ರಾಣಯಾಮ ಎಂಬ ಮತ್ತು ನಿರ್ಬೀಜ ಪ್ರಾಣಯಾಮ ಎಂದು. ಹೆಸರು ಹೇಳುವಂತೆ ಮಂತ್ರಾಚಾರ ಸಹಿತವಾಗಿ ಓಂ (ಅ,ಉ,ಮ ಸೇರಿ) “ಓಂ ನಮಃ ಶಿವಾಯ”, “ಓಂ ನಮೋ ಭಗವತೇ ವಾಸುದೇವಾಯ”, “ಓಂ ನಮೋ ದುರ್ಗಾ”, “ಓಂ ನಮೋ ನಾರಾಯಣ” ಇತ್ಯಾದಿ ನಿಮ್ಮ ಇಷ್ಟ ದೇವವನ್ನು ಸೇರಿಸಿಕೊಂಡು ಪ್ರಾಣಾಯಾಮ ಮಾಡುವುದು ಅಲ್ಲದೆ ಇದರಲ್ಲಿ 24 ಅಕ್ಷರಗಳ ಗಾಯತ್ರಿ ಮಂತ್ರವನ್ನು ಮಂತ್ರವನ್ನು ಬೀಜಮಂತ್ರವನ್ನಾಗಿ ಧ್ಯಾನಿಸಬಹುದು. ನಿರ್ಬೀಜ ಪ್ರಾಣಾಯಾಮವೆಂದರೆ ಯಾವುದೇ ಮಂತ್ರದ ಪ್ರಾರ್ಥನೆಗಳಿಲ್ಲದೆ ಪ್ರಾಣಾಯಾಮವನ್ನು ಮಾಡುವುದು.

ವೃತ್ತಿ ಪ್ರಾಣಾಯಾಮ :-

ಇದರಲ್ಲಿ ಎರಡು ವಿಧ. ಸಮೃದ್ಧಿ ಮತ್ತು ವಿಷಮ ವೃತ್ತಿ, ಪ್ರಾಣಯಾಮಗಳೆಂದು ಪ್ರಾಣಾಯಾಮದ ನಾಲ್ಕು ಮುಖ್ಯ ಅಂಗಗಳಾದ ಪೂರಕ, ಅಂತರ್, ಕುಂಭಕ, ರೇಖ ಮತ್ತು ಬಾಹ್ಯ ಕುಂಭಕಗಳ ಕಾಲಾವಧಿಯ ಪ್ರಮಾಣ ಅರ್ಥತ್ ಅನುಪಾತ ಸಮವಿದ್ದರೆ ಅದು ಸಮವೃತ್ತಿ ಪ್ರಾಣಾಯಾಮ ವ್ಯತ್ಯಾಸವಿದ್ದರೆ ಅದು ವಿಷಮ ವೃತ್ತಿ ಪ್ರಾಣಾಯಾಮವು.

ವೃತ್ತಿ ಪ್ರಾಣಾಯಮದಲ್ಲಿ ವಿವಿಧ ಪ್ರಕಾರದ ಅನುಪಾತಗಳು :-

(1:1:1:1) ಇದು ಕ್ರಮವಾಗಿ ಪೂರಕ ಅಂತರ ಕುಂಭಕ ರೇಖ ಮತ್ತು ಬಾಹ್ಯ ಕುಂಭಕಗಳನ್ನು ಮಾಡುವಾಗ ಅನುಸರಿಸಬಹುದಾದ ಕಾಲಾವಧಿಯ ಪ್ರಮಾಣ ಅಂದರೆ ಉದಾಹರಣೆಗೆ ಪೂರಕಾವಧಿ 5 ಸೆಕೆಂಡ್ ಗಳ ಆದರೆ ಉಳಿದ ಅಂತರ್, ಕುಂಭಕ, ರೇಚಕ, ಮತ್ತು ಬಾಹ್ಯ ಕುಂಭಕಗಳ ಕಾಲಾವಧಿಕೂಡ ತಲ ಐದು ಸೆಕೆಂಡುಗಳು ಇರುವುದು ಇದು ಸಮವೃತ್ತಿ ಪ್ರಾಣಾಯಾಮ… ಅಂತೆಯೇ (1:2:1:1), (1:4:2:1), (1:2:1), (1:4:1) ಇತ್ಯಾದಿ ವಿಷಮವೃತ್ತಿ ಪ್ರಾಣಾಯಾಮಗಳು ಅನುಪಾತದಲ್ಲಿ ಮೂರು ಗಣಕಗಳು ಮಾತ್ರವೇ ಇದ್ದರೆ ಅದು ಕ್ರಮವಾಗಿ ಪೂರಕ ಅಂತರ ಕುಂಭಕ ಮತ್ತು ರೇಚಕವಾಗಿರುತ್ತದೆ ಮತ್ತು ಅಲ್ಲಿ ಬಾಹ್ಯ ಕುಂಭಕವಿಲ್ಲ ಎಂದು ತಿಳಿಯಬೇಕು.

ಪ್ರಾರಂಭದಲ್ಲಿ ಕುಂಭರಹಿತವಾಗಿ ಮಾಡುವಾಗ ಪೂರಕ ಮತ್ತು ರೇಚಕಗಳು ಸಮನಾಗಿರಬೇಕು ಉದಾರಣೆಗೆ 1:1ರ ಅನುಪಾತದಲ್ಲಿ ಅಂದರೆ ಪೂರಕ 5 ಸೆಕೆಂಡುಗಳ ಆದರೆ ರೇಚಕ ಕೂಡ 5 ಸೆಕೆಂಡುಗಳಾಗಿರುತ್ತದೆ ಈ ಅವಧಿಯನ್ನು ನಿಧಾನವಾಗಿ ಮತ್ತು ಕ್ರಮವಾಗಿ ಹೆಚ್ಚಿಸುತ್ತಾ ಹೋಗಬೇಕು…. (6:6, 7:7,8:8,10:10,12:12)  ಸೆಕೆಂಡ್ ಗಳು ಈ ರೀತಿಯಲ್ಲಿ ಇದರಲ್ಲಿ ಪೂರ್ಣ ಸಾಧನೆ ಆಯಿತು ಅನ್ನಿಸಿದಾಗ ಅಂದರೆ ನಿರಾಯವಾಗಿ ಒತ್ತಡರಹಿತವಾಗಿ ಎಷ್ಟು ಹೊತ್ತು ಬೇಕಾದರೂ ಮಾಡಬಲ್ಲೆನೆಂಬ ಆತ್ಮ ವಿಶ್ವಾಸ ಬಂದ ನಂತರವೂ ನೀವು ಅಂತರ ಕುಂಭಕವನ್ನು ಅದರಲ್ಲಿಯೂ ಮೊದಲು ಲಘು ಅಂತ ಕುಂಬಕವನ್ನು ಸೇರಿಸಿಕೊಳ್ಳಬೇಕು. ಕುಂಭರಹಿತವಾಗಿ 10:10 ಸೆಕೆಂಡುಗಳಾದರೆ ಒಂದು ನಿಮಿಷಕ್ಕೆ ಮೂರು ಸುತ್ತು ಪ್ರಾಣಯಾಮಗಳಾಗುತ್ತದೆ.

ಅಂತರ್-ಕುಂಭಕವನ್ನು ಮೊದಲಿಗೆ ಎರಡು ಅಥವಾ ಮೂರು ಸೆಕೆಂಡ್ ಗಳಿಗಿಂತ ಪ್ರಾರಂಭಿಸಬೇಕು. ಅಂದರೆ, ಆರು ಸೆಕೆಂಡುಗಳ ಪೂರಕ, ರೇಚಕಗಳಂತೆ ಮತ್ತು ಮೂರು ಸೆಕೆಂಡ್ ಗಳ ಅಂತರ ಕುಂಭಕದೊಂದಿಗೆ ಅದು 6:2:6, ಅಥವಾ 6:3:6 ರ ಅನುಪಾತದಲ್ಲಿ ಇರುತ್ತದೆ. ನಂತರ ಬಹಳ ನಿಧಾನವಾಗಿ ಹೆಚ್ಚಿಸುತ್ತಾ ಅದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಆಯಾಸ ಒತ್ತಡಕೊಳ್ಳಕಾಗದಂತೆ ಕಾಳಜಿ ಪೂರ್ವಕವಾಗಿ ಮುಂದುವರೆಯಬೇಕು.

ಅದೇ ರೀತಿಯಲ್ಲಿ ಅವಧಿಯನ್ನು ಮಾತ್ರ ಬಹಳ ನಿಧಾನವಾಗಿ ಹೆಚ್ಚಿಸುತ್ತಾ ಹೋಗಬೇಕು ಇದನ್ನು ಸಾಮಾನ್ಯ ಪ್ರಾಣಯಾಮ ಮತ್ತು ನಾಡಿಶೋಧನ ಪ್ರಾಣಾಯ ಮಗಳಲ್ಲಿ ಅಭ್ಯಾಸ ಮಾಡಬಹುದು “ಈ ಅನುಪಾತ ಇಷ್ಟೇ ಇರಬೇಕು” ಎಂಬ ನಿಯಮವಿಲ್ಲ. (1:1:1), (3:1:3), (4:1:4), (3:2:3) ಇತ್ಯಾದಿ. ನಮ್ಮ ಸಾಮರ್ಥ್ಯ ಮತ್ತು ದೈಹಿಕ ಅನುಕೂಲಕ್ಕೆ ತಕ್ಕಂತೆ ಅನುಸರಿಸಬಹುದು ಮತ್ತು ಇದನ್ನು ಬಹಳ ನಿಧಾನವಾಗಿ ಸಾಧನೆ ಮಾಡುತ್ತ ಹೆಚ್ಚಿಸುತ್ತಾ ಹೋಗಬೇಕು. ಇಲ್ಲಿ ಯೋಗಭ್ಯಾಸದಲ್ಲಿ ಅದರಲ್ಲೂ ವಿಶೇಷವಾಗಿ ಪ್ರಾಣಯಾಮದಲ್ಲಿ ಗಡಿಬಿಡಿ, ಈರ್ಷೆ, ಸಹನೆ, ಅನಾರೋಗ್ಯಕರ ಸ್ಪರ್ಧೆ ಇರಕೂಡದು ಮತ್ತು ಇಲ್ಲಿ ಒಳದಾರಿ ಅಥವಾ ಶಾರ್ಟ್ಕಟ್ ಮೆಥಡ್ ಅನ್ನೋದಿಲ್ಲ. ಪ್ರಾಮಾಣಿಕವಾಗಿ ಕಷ್ಟಪಟ್ಟಷ್ಟು ನಿಮಗೆ ಫಲಪ್ರಾಪ್ತಿ ಅಷ್ಟೇ.