ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ರಾಜು ಹೊಸದಾಗಿ ಕಾರು ಕೊಂಡಿದ್ದ.ಡ್ರೈವರ್ ಕರೆದುಕೊಂಡು ಎಲ್ಲಿಗೋ ಹೊರಟಿದ್ದ.ಕಾರಿನಲ್ಲಿದ್ದ ಪೆಟ್ರೋಲ್ ಮುಗಿದುಹೋಯಿತು ಆಗ ಡ್ರೈವರ್….

 ಡ್ರೈವರ್ :ಸಾರ್ ಕಾರಿನ್ನು ಮುಂದಕ್ಕೆ ಹೋಗೊಲ್ಲ.ಪೆಟ್ರೋಲ್ ಮುಗಿದು ಹೋಯ್ತು

 ರಾಜು : ಮುಂದೆ ಹೋಗದಿದ್ರೆ  ಬೇಡ.ಹಿಂದಕ್ಕೆ ನಡಿ ಮನೆ ಸೇರ್ಕೊಳ್ಳೋಣ.

Join Our Whatsapp Group

***

ಅಪ್ಪ : ಲೋ ರಾಜು, ನಿನ್ನಂಥ ಪೋಲಿಗಳಿಗೆ ಆ ಲಕ್ಷ್ಮಿ ಖಂಡಿತ ಒಲಿಯೋದಿಲ್ಲ.

 ರಾಜು : ಅದು ಗೊತ್ತಾಗೇ ಕಣಪ್ಪ ನಾನು ಸರಸ್ವತಿನ ಲವ್ ಮಾಡತಾ ಇರೋದು.

***

ರಾಜು : ( ಹೋಟೆಲ್ ನಲ್ಲಿ )ಎರಡು ಬಿಸಿಬಿಸಿ ಕಾಫಿ ಕೊಡಪ್ಪ.

 ಗೀತ : ರೀ ಕಾಫಿ ತುಂಬಾ ಬಿಸಿ ಇದೆ.

 ರಾಜು : ಬೇಗ ಬೇಗ ಕುಡಿ ಆರಿ ಹೋಗುತ್ತೆ.

 ಗೀತ : ಆರ್ಲಿ  ಬಿಡಿ

 ರಾಜು : ಬೋರ್ಡ್ ನೋಡು, ಬಿಸಿ ಕಾಫಿಗೆ 10ರೂ ಕೋಲ್ಡ್ ಕಾಫಿಗೆ 20 ರೂಪಾಯಿ.