ಮನೆ ಅಪರಾಧ ಮಂಡ್ಯ: ಕುರಿ ಕಳ್ಳತನ ಮಾಡಿದ ಕಳ್ಳರನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರು.!

ಮಂಡ್ಯ: ಕುರಿ ಕಳ್ಳತನ ಮಾಡಿದ ಕಳ್ಳರನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರು.!

0

ಮಂಡ್ಯ: ಹಾಡುಹಗಲೇ ಕುರಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಹಿಡಿದು ಗೂಸಕೊಟ್ಟ ಯುವಕರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಗ್ರಾಮದ ಕೆರೆಯಲ್ಲಿ ಕುರಿ ಮಂದೆ ಮೇಯಿಸುತ್ತಿದ್ದ ವೇಳೆ ಕಳ್ಳರಿಬ್ಬರು ಬೈಕಿನಿಂದ ಬಂದು ಕುರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು.ಈ ವೇಳೆ ಗ್ರಾಮದ ಯುವಕರು ಬೈಕಿನಿಂದ ಹಿಂಬಾಲಿಸಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಕುರಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಳ್ಳರು ಪಾಂಡವಪುರದ ಕಣಿವೆ ಕೊಪ್ಪಲು ಗ್ರಾಮದವರು ಎಂದು ತಿಳಿದು ಬಂದಿದೆ.

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.